ಕೊಲೊನ್ನ, ಫ್ರಾ ಫ್ರ್ರಾನ್ಸೆಸ್ಕೊ
1432-1527. ಇಟಲಿಯ ಸಾಹಿತಿ, ಡಾಮಿನಿಕನ್ ಪಂಥಕ್ಕೆ ಸೇರಿದ ಭಿಕ್ಷು. ಹುಟ್ಟಿದ್ದು ವೆನಿಸ್‍ನಲ್ಲಿ. ಹೈಪರ್ನೋಟೊ ಮ್ಯಾಚಿಯ ಪಾಲಿಫಿಲಿ ಎಂಬ ಅದ್ಭುತರಮ್ಯ ಕಥೆಯನ್ನು ಬರೆದ. ಅಷ್ಟಾಗಿ ಒಳ್ಳೆಯ ಸಾಹಿತ್ಯವಲ್ಲದಿದ್ದರೂ ಜೋವನಿ ಬಿಲ್ಲಿನಿ ಮತ್ತು ಪಾಲ್ ಡಿ ಸೇಂಟ್ ವಿಕ್ಟರ್-ಇವರ ವಿಶಿಷ್ಟ ಚಿತ್ರಗಳಿಂದಾಗಿ ಈ ಗ್ರಂಥ ಉಳಿದು ಬಂದಿದೆ. 1592ರಲ್ಲಿ ದಿ ಸ್ಟ್ರೈಫ್ ಆಫ್ ಲವ್ ಇನ್ ಎ ಡ್ರೀಮ್ ಎಂಬ ಅಭಿದಾನದಿಂದ ಈ ರಮ್ಯ ಕಥೆಯ ಸಂಗ್ರಹ ಆವೃತ್ತಿಯನ್ನು ಸರ್ ರಿಚರ್ಡ್ ಡ್ಯಾಲಿಂಗ್‍ಟನ್ ಪ್ರಕಟಿಸಿದ್ದಾನೆ. 
	(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ